ಬಹುಳಾ ಕೋಟೆಯು ನಾಸಿಕ್ ಜಿಲ್ಲೆಯ ಇಗತ್ಪುರಿ ತಾಲೂಕಿನಲ್ಲಿದೆ. ಇದು ಥಾಲ್ ಘಾಟ್ ಮೂಲಕ ಹಾದುಹೋಗುವ ಪ್ರಾಚೀನ ವ್ಯಾಪಾರ ಮಾರ್ಗದಲ್ಲಿದೆ. ಕೋಟೆಯು ಗುಲಾನೆ ಗ್ರಾಮದ ಬಳಿ ಇದೆ. == ತಲುಪುವ ವಿಧಾನ == ಗುಲಾನೆ ಗ್ರಾಮವು ಇಗತ್ಪುರಿಯಿಂದ ೩೭ ಕಿಮೀ ದೂರದಲ್ಲಿದೆ. ಇಗತ್‌ಪುರಿಯು ಮುಂಬೈ-ನಾಸಿಕ್ ರೈಲ್ವೆ ಮಾರ್ಗದಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿ NH160 ರಲ್ಲಿದೆ. ಕೋಟೆಯು ಗುಲಾನೆ ಗ್ರಾಮದಿಂದ ಸುಮಾರು ೪ ಕಿಮೀ ದೂರದಲ್ಲಿದೆ. ಬೆಟ್ಟದ ತುದಿ ತಲುಪಲು ಸುಮಾರು ಒಂದು ಗಂಟೆ ಸಮಯ ಹಿಡಯುತ್ತದೆ. ಬೆಟ್ಟವನ್ನು ಸುತ್ತುವರೆದಿರುವ ಮತ್ತು ಕೋಟೆಯ ತುದಿಗೆ ಕೊಂಡೊಯ್ಯುವ ೭೦ ಕಲ್ಲಿನ ಮೆಟ್ಟಿಲುಗಳಿವೆ. ಕೆಲವು ಕಟ್ಟಡಗಳ ಅವಶೇಷಗಳು ಮತ್ತು ಮೇಲ್ಭಾಗದಲ್ಲಿ ನೀರಿನ ತೊಟ್ಟಿಗಳಿವೆ. == ಇತಿಹಾಸ == ೧೮೧೮ ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಕ್ಯಾಪ್ಟನ್ ಬ್ರಿಗ್ಸ್ ಕೋಟೆಯನ್ನು ವಶಪಡಿಸಿಕೊಂಡರು. ೧೯೪೪ ರಲ್ಲಿ ಪಕ್ಕದ ಪ್ರದೇಶದೊಂದಿಗೆ ಈ ಕೋಟೆಯನ್ನು ಭಾರತೀಯ ಮಿಲಿಟರಿಗೆ ಹಸ್ತಾಂತರಿಸಲಾಯಿತು. ಇದನ್ನು ಅವರು ನಿಯಮಿತವಾಗಿ ಫೈರಿಂಗ್ ರೇಂಜ್ ಆಗಿ ಬಳಸುತ್ತಾರೆ. == ಇವನ್ನೂ ನೋಡಿ == ನಾಸಿಕ್ == ಉಲ್ಲೇಖಗಳು ==